
ಮೈಸೂರು: ಸಿಎಂ ಸಿದ್ದರಾಮಯ್ಯ ಆಪ್ತ ಮರಿಗೌಡ ವಿರುದ್ಧ ದೂರು ನೀಡಿ ಆತ ಜೈಲಿಗೆ ಹೋಗಲು ಕಾರಣರಾಗಿದ್ದ ಐಎಎಸ್ ಅಧಿಕಾರಿ ಸಿ.ಶಿಖಾ ಅವರನ್ನು 20 ದಿನದಲ್ಲಿ 2ನೇ ಬಾರಿ ವರ್ಗಾವಣೆ ಮಾಡಲಾಗಿದೆ.
ಶಿಖಾರವನ್ನು ಕೆಲ ದಿನಗಳ ಹಿಂದೆ ಸಮಾಜ ಕಲ್ಯಾಣ ಇಲಾಖೆ ಆಯುಕ್ತರನ್ನಾಗಿ ನೇಮಕ ಮಾಡಲಾಗಿತ್ತು. ಇದೀಗ ಪಿಯು ಇಲಾಖೆ ನಿರ್ದೇಶಕರಾಗಿ ನೇಮಿಸಲಾಗಿದೆ.
ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಿ ಶಿಖಾ ಅವರಿಗೆ ಧಮಕಿ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಕೆ. ಮರಿ ಗೌಡ ಜೈಲುಪಾಲಾಗುವಂತೆ ಮಾಡಿದ್ದರು.
2004ರ ಬ್ಯಾಚಿನ ಐಎಎಸ್ ಅಧಿಕಾರಿ ಸಿ ಶಿಖಾ ಅವರು ಮಾರ್ಚ್ 27, 2013ರಂದು ಮೈಸೂರಿನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದರು. ತಿರುಚನಾಪಳ್ಳಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಶಿಖಾ ಅವರು ಇದಕ್ಕೂ ಮುನ್ನ ಗದ ಜಿಲ್ಲಾಧಿಕಾರಿಯಾಗಿದ್ದರು.
Advertisement